(Text by Sourabha Rao)
Prema, a beneficiary of our Livelihood Support programme, is a farmer of relentless dedication. A hardworking woman from a forest community, dwelling in the Sollepura Voluntary Relocation Centre, Prema was honoured with the ‘Best Progressive Farmer, District Level-Mysuru’ Award yesterday at the Krishi Mela by the University of Agricultural Sciences, Bengaluru. She was selected for the inauguration of the programme.
Prema grows ragi, tomato, beans, banana, cardamom, Mangaluru cucumber, hyacinth bean, chia and mung bean among other crops. As committed as she is to farming, she is also into dairy farming and beekeeping in the voluntary relocation centre.
Another beneficiary of the programme, Rajeshwari, is a farmer who teams up with her father to grow cotton, banana, sesame, cardamon, coconut, areca, pepper, lemon, silver, jackfruit among other things. Also from Sollepura Voluntary Relocation Centre, her passion for farming has earned her the ‘Best Young Progressive Farmer – Taluk Level’ Award yesterday at the Krishi Mela by the University of Agricultural Sciences, Bengaluru.
We are delighted and proud that Prema and Rajeshwari have earned these awards that they rightly deserve. We also wish them and their family the best in all their future endeavours as farmers.
We also hereby acknowledge the ever passionate, Mr. Govindappa, who is an integral part of our Livelihood Support programme, for all his support and work towards the welfare of these beneficiaries.
ನಮ್ಮ ಜೀವನೋಪಾಯ ಬೆಂಬಲ (ಲೈವ್ಲಿಹುಡ್ ಸಪೋರ್ಟ್) ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರಾದ ಪ್ರೇಮಾ ಅವಿರತ ಶ್ರಮ, ಶ್ರದ್ಧೆಯಿಂದ ದುಡಿಯುವ ರೈತಮಹಿಳೆ. ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ ಪ್ರೇಮಾ, ಸೊಳ್ಳೇಪುರ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ 'ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ'ಯನ್ನು ಪ್ರೇಮಾ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನೂ ಪ್ರೇಮಾ ನೆರವೇರಿಸಿದರು.
ರಾಗಿ, ಟೊಮೇಟೋ, ಬೀನ್ಸ್, ಬಾಳೆ, ಏಲಕ್ಕಿ, ಮಂಗಳೂರು ಸೌತೆ, ಅವರೆಕಾಯಿ, ಚಿಯಾ ಮತ್ತು ಹೆಸರುಬೇಳೆ ಮುಂತಾದ ಬೆಳೆ ಬೆಳೆಯುವ ಪ್ರೇಮಾ, ಹಸುಗಳನ್ನೂ ಸಾಕಿ ಸೊಳ್ಳೇಪುರದಲ್ಲಿ ಡೈರಿ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಜೇನುಸಾಕಣೆಯನ್ನೂ ಮಾಡುತ್ತಿದ್ದಾರೆ.
ಯೋಜನೆಯ ಫಲಾನುಭವಿಗಳಲ್ಲಿ ಮತ್ತೊಬ್ಬರಾದ ರಾಜೇಶ್ವರಿ, ತಮ್ಮ ತಂದೆಯ ಜೊತೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತಮಹಿಳೆ. ಸೊಳ್ಳೇಪುರ ಪುನರ್ವಸತಿ ಕೇಂದ್ರದಲ್ಲಿ ವಾಸವಾಗಿರುವ ರಾಜೇಶ್ವರಿ, ಹತ್ತಿ, ಬಾಳೆ, ಎಳ್ಳು, ಏಲಕ್ಕಿ, ತೆಂಗು, ಅಡಿಕೆ, ಮೆಣಸು, ನಿಂಬೆ, ಸಿಲ್ವರ್, ಹಲಸು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಕೃಷಿಯಲ್ಲಿ ಅವರಿಗಿರುವ ಹುಮ್ಮಸ್ಸು, ಅವರ ಪರಿಶ್ರಮ ಅವರಿಗೆ ಯಶಸ್ಸು ತಂದುಕೊಟ್ಟಿದೆ. ಇದಕ್ಕೆ ನಿದರ್ಶನವೆಂಬಂತೆ ನಿನ್ನೆ ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ 'ತಾಲ್ಲೂಕು ಮಟ್ಟದ ಪ್ರಗತಿಪರ ಯುವ ರೈತ ಮಹಿಳಾ ಪ್ರಶಸ್ತಿ'ಯನ್ನು ರಾಜೇಶ್ವರಿ ಅವರಿಗೆ ನೀಡಿ ಗೌರವಿಸಲಾಯಿತು. ಅವರಿಗೆ ನಮ್ಮ ಅಭಿನಂದನೆಗಳು.!
ಪ್ರೇಮಾ ಮತ್ತು ರಾಜೇಶ್ವರಿ ಅವರ ಕೆಲಸದ ಬಗ್ಗೆ, ಅದರಿಂದ ಅವರಿಗೆ ಸಿಗುತ್ತಿರುವ ಸನ್ಮಾನ, ಪ್ರಶಸ್ತಿಗಳ ಬಗ್ಗೆ ನಮಗೆ ಅಪಾರ ಹೆಮ್ಮೆ ಮತ್ತು ಗೌರವವಿದೆ. ಅವರ ಮುಂದಿನ ಎಲ್ಲಾ ಯೋಜನೆಗಳಿಗೂ ನಮ್ಮ ಯೋಜನೆಯ ಮೂಲಕ ನಾವು ಸಂಪೂರ್ಣ ಬೆಂಬಲ ಹೀಗೇ ನೀಡಲು ಮುಂದುವರೆಸುತ್ತೇವೆ.